Friday, November 17, 2017

Shanaischara charitam (ಶ್ರೀ ಶನೈಶ್ಚರ ಚರಿತಂ) I /21 ರಿಂದ 40

ಶ್ರೀ ಶನೈಶ್ಚರ ಚರಿತಂ ೧ /೨೧ ರಿಂದ ೪೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ,ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )   


ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ಪ್ರಥಮ ಸಂಧಿ ( ೨೧ ರಿಂದ ೪೦ )

ದ್ವಿತೀಯ ಪುತ್ರನೆ ಶ್ರೀ ಶನೈಶ್ಚರ - | ತ್ರಿತಿಯದಿಂ ಕ್ರಮ ಕ್ರಮದಿ ಪುಟ್ಟಿತ - | ಪತಿ ಭದ್ರೆಯು ಕಾಲಿಂದಿ  ಸಾವಿತ್ರಿ ಕನ್ಯೆಯರು  ||೨೧ || 

ವಿಷ್ಣುವಿಗೆ ಕಾಳಿಂದಿ ಅರ್ಪಿಸಿ |  ಸೃಷ್ಟಿ ಕೃತುಗೆ ಸಾವಿತ್ರಿಯಿತ್ತು |  ಪೂಷ್ಣ ದೇವನು ಮದುವೆಯನು ಮಾಡಿದನು ವೈಭವದಿ || ೨೨  ||
ಧರೆಯ ಮೇಗೆಡೆ ರವಿಕುವರಿಯರು |  ಗಿರಿಯಸ್ತಮದಿ ಭದ್ರೆಯಮುನೆಯು | ಹರಿದುಹೊಳೆ ಸಾವಿತ್ರಿತಪತಿಯು ಉದಯಚಲದುದಿಸಿ    || ೨೩ ||
ರವಿಯ ಸಹವಾಸದಲಿ ಸಂಜ್ಞೆಯ | ಯುವತಿ ಅವತೆಯು ಬಾಡುತಿರೆ ಬಾ - | ಳುವುದೇ ಕಷ್ಟವು ಪ್ರಖರ ಉಷ್ಣತೆ ಕಿರಣಗಳ ಬಳಿದು || ೨೪ ||
ಸವೆಯುತಿಹ ದೇಹವನು ಸಂಜ್ಞೆಯು | ಅವತೆ ನೋಡಿರೆ ದುಃಖದಿಂ ಬಲು | ಕವಿದು ಚಿಂತೆಯು ಚಿತೆಯ ರವಿಯಿಂ ಬಳಲಿ ಬೆಂಡಾಗಿ ||೨೫  ||
ತಾಳದೆಯೇ ಸತಿಸಂಜ್ಞೆ ತನ್ನಯ | ಹಾಳುಬಾಳುವೆ ಕುರಿತು ಹಳಿದಳು |   ಖುಳ್ಳ ಯುಕ್ತಿಯು ಯೋಜಿಸಿದಳಾ ತನ್ನ ಛಾಯೆಯೋಳು ||೨೬ ||
 ಛಾಯೇ ಸಂಜ್ಞೆ ಯ ವರ್ಣ ರೂಪದ | ಮಾಯೆ ಮೂರುತಿಯಾಗಿ ರೂಪಿಸಿ |  ಕಾಯ ಕಾಂತಿಯು ಏಕರೂಪ ಸವರ್ಣ ನಿರ್ಮಾಣ  || ೨೭ ||
ಪ್ರತಿಯ ರೂಪ ಸವರ್ಣೆ ನಿರ್ಮಿಸಿ | ಶ್ರುತಿಸಿ ಆಜ್ಞೆಯ ನಿತ್ತಳೀಪರಿ |  ಸತಿಯು ನೀ ರವಿಗಾಗಿ ರತಿ ಸುಖ ಪಡೆಯುತಿರುಯೆಂದು  || ೨೮ || 
 
ಮಿತ್ರ ಸತಿಯಾಗಿರುತೆ ನೀನು | ಗೊತ್ತು ಗುರಿ ತಪ್ಪಿಸಲು ಬೇಡ | ಕುತ್ತು ಬಂದರೆ ನನ್ನ ಸ್ಮರಣೆಯು ಮಾಡು ನೀಗಿಪೆನು  || ೨೯ ||

ಸೂರ್ಯನೊಂದಿಗೆ ವಿಷಯಸುಖವನು | ತೂರ್ಯದಿಂದುಪಭೋಗ ಗೊಳ್ಳುತೆ | ಕಾರ್ಯಕಂಟಕ ವೆನಿಸೆ ನೆನೆವುದು ನನ್ನಪೆಸರಿಂದೆ || ೩೦ ||

ಆಜ್ಞೆ ಛಾಯೆ ಸವರ್ಣೆ ಗಿತ್ತು ತಾ - | ಸಂಜ್ಞೆ ತಂದೆಯ ಮನೆಯ ಸೇರಲು | ಸೂಜ್ಞತೆಗೆ ನ್ಯೂನತೆಯು ಬರುವುದು ಕಂಡ ದಕ್ಷ ಪತಿ || ೩೧ ||
ಮಗಳೇ ನೀ ಬಂದಿಹುದು ಯಾಕದು ? | ಬಗೆಯು ಎನಿಹುದೆಂದು ಕೇಳಲು | ಖಗನ ಪ್ರಖರತೆ ಕುರಿತು ಹೇಳಲು ತಂದೆ ಬೋಧಿಸಿದ || ೩೨ ||
ಹಿರಿಯಳಾಗಿಹ ಮೇಲೆ ಕನ್ಯೆಯ | ಹಿರಿಯನಲಿ ಲಗ್ನವನು ಮಾಡಿರೆ | ಸರಿ ಸಮಾನರು ತಂದೆತಾಯಿಗೆ ಮಕ್ಕಳೆಂಬುವರು || ೩೩ ||

ಐದು ಮಕ್ಕಳ ಹೆತ್ತ ಹಿರಿಯಳೆ | ಐದಿದೆಯೆ ಪತಿಯಿಂದ ಪರದಲಿ | ಐದೆತನವಲ್ಲಹುದು ನಿನ್ನಯ ಕೃತಿಗೆ  ಧಿಕ್ಕಾರ ||೩೪ ||

ಕೇಡಿರಲಿ ಒಳ್ಳೆಯದೇ ಇರಲಿ | ಬೇಡಿರಲಿ ಬಿಡುವಾಗಿಯಾಗಲಿ | ನಾಡ ತಿರುಗದೆ ಪತಿಯೆ ಪರದೈವೆಂದು ಬಗೆಯುವುದು  || ೩೫ ||

ಮದುಯಾಗಿಹ ಮಗಳು ತನ್ನಯ | ಸದನದಲಿ ನಲಿನಲಿಯುತಿರುವುದು | ಕದನ ತೆಗೆಯುತ ಎರಡನೆಯ ಸ್ಥಳದಲ್ಲಿ  ಬೇಡುವುದು || ೩೬ ||

ತಾಯಿ ತಂದೆಯ ಸರಿಯೇ ನೀವಿರೆ | ಗಾಯಗೊಂಡರು ನಿಮ್ಮ ಸಂಸಾ - |  ರಾಯತದ ಹೊರ ಬಾರದಂತೆಯೇ ಸಹಿಸಿ ನಡೆಯುವುದು || ೩೭ ||

ಮನವು ಚಂಚಲ ಸ್ಥಿರವೆ ಇರಲಿ | ಘನವು ತನ್ನಯ ಮನೆಯು ಪಿಡಿದಿರೆ | ವಿನಃ ವೇಶ್ಯೆಯ ವೃತ್ತಿಗೆಳೆಯುವ ದೀ ಮನವು ಶುನಗ || ೩೮ ||

ಋತುಮತಿಯು ಆಗಿರಲು ಮಗಳನು | 
ಪತಿಯಮನೆ ಹೊರತಾಗಿಇರುವುದು | ಪತಿತಪಾಪಿಯು ಎನಿಪುದೂ ಇದು ತಂದೆಮನೆ ಉಂಟು || ೩೯ ||
ಹೆಣ್ಣು ಪುಣ್ಯದ ಪಣತಿ ದೀಪವು | ಬಣ್ಣ ಮೀರಲು ಕೋಟಿ ಕುಲಗಳ | ಗಣ್ಯವೆನೆ ನರಕದೊಳು ಬಿಳುವುದಿರಲು ನಿನ್ನಿಂದ || ೪೦ ||
                                     .........   ಕ್ರಮಶಃ 

No comments:

Post a Comment