Friday, December 01, 2017

Shanaischara charitam (ಶ್ರೀ ಶನೈಶ್ಚರ ಚರಿತಂ) I / 61 ರಿಂದ 80

ಶ್ರೀ ಶನೈಶ್ಚರ ಚರಿತಂ ೧ /೬೧ ರಿಂದ ೮೦
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,    
                          ಶ್ರೀದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )   
 ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ಪ್ರಥಮ ಸಂಧಿ ( ೬೧ ರಿಂದ ೮೦ )
ಶ್ರಾದ್ಧ ಋಷಿ ಮನು ವ್ಯತಿಪಾತನು |  ಅರ್ಧಯಾಮಕು ಲಿಕರು ಪುತ್ರರು |  ಭದ್ರೆ ವೈಧೃತಿ ಜನಿಸಿ ಸವರ್ಣೆ ಕನ್ಯೆಯರು  ||೬೧||
ಕೆಲವುದಿನಗಳು ಕಳೆಯೇ ಮಕ್ಕಳು | ಮಲಮಕ್ಕಳಿಂ ಪತಿಯ ಮಧ್ಯದಿ | ವಿಲಸಿತದಿ ಮಿಲಿಮಿಲಿತಳಾಗಿರೆ ತನ್ನ ಬಾಳಿನಲಿ ||೬೨||
ಒಂದುದಿನ ಶನಿ ಹಸಿವಯಿಂದಲಿ | ಕಂದಕಡು ಹಟಮಾಡಬೇಡಿದ |ತಿಂದುಕೊಳ್ಳುವಕುರಿತು ಕೊಡು ಎಂದೆನುತೆ ಕೇಳಿದನು ||೬೩ ||
ಪೂಜೆ ನೈವೆದ್ಯಗಳು ಮುಗಿಯಲಿ | ತೇಜರಾಜರು ಬಂದಬಳಿ ಕೀ | ಭೋಜನವ ನೀಡುವೆನು ತಾಳು ಎಂದಳಾ ತಾಯಿ  ||೬೪ ||
ಮೊದಲು ನನಗೆಡೆ ಮಾಡಿಕೊಡು ನೀ| ಉದರದುರಿಯನು ತಾಳೆನಾನೇಂ |ದೆದುರಿಸಿದ ಕೆಂಗಣ್ಣ ಕಿಡಿಗಳ ಬಾಲಶನಿದೇವ ||೬೫ ||
ಸಲುಗೆಯಿಂದಲಿ ಕಂದಪಿಂಗಳ | ಬಲದಕಾಲನೆ ಎತ್ತಿ ಒದೆದನು | ನಲುಮೆಯರಿಯದೆ ಸವತಿ ಭಾವನೆ ವ್ಯಕ್ತ ಮಾಡಿದಳು  ||೬೬||
ಎಲವೋ ಶನಿ ನೀ ನನ್ನ ಮೇಗೆಡೆ | ಛಲದಿ ಕೆಂಗೆಣ್ಣ ಗಳ ತಿರುವಿದಿ | ಬಲದ ಕಾಲನು ಎತ್ತಿದುದು ತಾ ಬತ್ತಿ ಹೋಗಿರಲಿ  ||೬೭ ||
ತಾಯಿ ಮನ್ನಣೆಬಿಟ್ಟು ಒದೆಯುವಿ |ಹೇಯಕಾರ್ಯಕೆ ಮನವಒಪ್ಪಿತೆ | ಮಾಯೆಮೋಹವ ಅರಿಯದಿಹ ಹುರಿಗಾಲಕಾಲನೆ ನೀ  ||೬೮ ||
ಹೆಳವನಾಗೆಲೋ ಒಲುಮೆಬೇಡೆಲೋ | ಹಳಿದುಶಾಪವ ಕೊಟ್ಟುಬಿಟ್ಟಳು | ಅಳುತೆ ತಾಯಿಯಬಗೆಗೆ ಸಂಶಯಕಂಡ ಕಂದಶನಿ  ||೬೯ ||
ಕಳವಳದಿ ಶನಿ ತಂದೆ ಎಡೆನಡೆ | ಗಳುಹಿದನು ಹಳಿಹಳಿದ ಶಾಪವ || ತಿಳುಹಿ ತಾಯಿಯಬಗೆಗೆ ಸಂಶಯ ಬರುವುದೆನಗೆಂದ  ||೭೦ ||
ಪಿಂಗಳನ ಕಂಗಳದಿ ಕಂಬನಿ | ಯಂಗಳನು ಗಲಿತವನು ಕಂಡೊಡೆ | ಹಿಂಗಿಸಲು ಹಟವನ್ನು ಕೇಳಿದ ನುಡಿಯ ರವಿರಾಯ || ೭೧ ||
ಸುತಗೆ ಶಾಪವನೀವ ಘಟನೆಯು | ಮಾತೃವೃತ್ತಿ ಗಧರ್ಮ ವೆನಿಸಿತು | ಮಾತುಮೊದಲಿದೆ ಲೋಕದೊಳ್ ಕೇಳಿದುದುಅಚ್ಚರಿಯ  ||೭೨ ||
ಮಗನ ಹಟಕೆದುರಾಗಿ ಶಾಪವ | ನಿಗುವ ತಾಯಿಯು ನಿಜವೊಸುಳ್ಳೋ | ಬಗೆಯುಸುಜ್ಞಾನದೊಳು ದೃಷ್ಟಿಯನಿರಿಸಿ ನೋಡಿದನು  ||೭೩||
ತಿಳಿದು ಅಂತರ್ಜ್ಞಾನ ದಿಂದಲೇ | ಉಳಿದ ಛಾಯೆ ಸವರ್ಣಿ ಸಂಜ್ಞೆಯು | ಅಳಿದು ಹೋಗಿದ ರೂಪ ತನು ಹಯವಾಗಿ ತಪದಲ್ಲಿ  ||೭೪||
ಮಗನ ತಿಳುವಳಿಕೆಯನು ಗ್ರಹಿಸಿಯೇ | ಖಗನು ಕೇಳಿದ ವರ್ಣೆ ಸತಿಯಳ | ನಿಗಿನಿಗಿಪ ಬಲು ಕೆಂಡಕೋಪದಿ ಬಂದು ಕೇಳಿದನು  ||೭೫ ||
ಮೊಸದಂದಲೇ ಇರುವ ನೀನು | ವಾಸಮಾಡಿದೆ ಯಾರು ಪೇಳದು | ನೇಸರನು ನಿಜ ಕೇಳೆ ತಾನದು  ವರ್ಣೆ ಪೇಳಿದಳು   ||೭೬||
ನಾನು ಸಂಜ್ಞೆ ಯ ದೇಹ ನೆರಳು | ತಾನೇ ನಿರ್ಮಿಸಿ ನನ್ನ ನಿರಿಸಿದ | ಭಾನು ಸೇವೆಯ ಹಚ್ಚಿ ಹೋದಳು ಸಂಜ್ನೆದೇವಿಯು ತಾ  ||೭೭ ||
ಗರತಿ ಸರತಿಯು ನನ್ನ ಏಳು | ವರಕುಮಾರರು ಕುವರಿಯವರು | ಇರುವ ನನ್ನೆಡೆ  ದೋಷವಿಲ್ಲವು ವರ್ಣೆ ಪೇಳಿದಳು   || ೭೮||
ಬಳಿಕ ಸೂರ್ಯನು ಶನಿಗೆ ಪೇಳಿದ | ತಿಳಿಯುದೀಕೆಯು ತಾಯಿ ಸರಿ ಎಂ | ದಳಯು ಶಾಪವು ವ್ಯರ್ಥವಾಗದೆ ಹೆಳವತನವಹುದು ||೭೯||
ಕಾಲುಗಳು ಪರಿಪೂರ್ಣಹೋಗದೆ | ಪಾಲನೆಯು ಉಂಟಾಗಲವಳಿಂ | ಬಾಲಕನೆ ಕುಂಟಾಗಿ ಉಳಿಯುವಿ ಬಾಧೆ ಇಲ್ಲೆಂದ  || ೮೦||
ಕ್ರಮಶಃ

No comments:

Post a Comment