Friday, December 22, 2017

SHANAISHCHARA Chakra (अथ श्री महर्षी वेदव्यास विरचित इष्टार्थ सिद्धिप्रद पीडाहर शनैश्चर चक्रः) ||

|| अथ श्री महर्षी वेदव्यास विरचित इष्टार्थ सिद्धिप्रद पीडाहर शनैश्चर चक्रः  ||       
 || ಅಥ ಶ್ರೀ ಮಹರ್ಷಿ ವೇದ ವ್ಯಾಸ  ವಿರಚಿತ  ಇಷ್ಟಾರ್ಥಂಗಳ ಸಿದ್ಧಿ ಪ್ರದ ಪಿಡಾಹರ ಶನೈಶ್ಚರ ಚಕ್ರಃ ||

೯ 
   || ಅಂ ಶಕ್ತಿಂ || || ಶಂ ಬಿಜಂ ||  ||  ಶ್ರೀಮತ್ ಶನೈಶ್ಚರಃ ||  || ಶಿಂ ಕಿಲಕಂ ||
                                                        ||
   || ಇದಮ್ ಚಕ್ರ ವಿನಿಯೋಗ ರಿತ್ಯಂ ||
ತವ ಮಹಾ ಸಿದ್ಧಿಯುತ ಮಹಿಮಾನ್ವಿತ ಪವಿತ್ರ | ದಿವಿಜ ಶ್ರೀ ಶನೈಶ್ಚರ ಮೂಲದೊಳ್ ಮಂತ್ರದಿಂ | ಭುವಿ ದುಃಖ ಹರಣಕ್ಕೆ ಯಂತ್ರದಿಂ ಚಕ್ರಮಂ ಈ ರೂಪ ವಿನಿಯೋಗವು || ೧ ||
ಮನದೊಳ್ ಕಿಲ್ಮಿಷಮಂ ತರದೆ ತಾಕೊಪಿಸದೇ | ದಿನವು ಶನಿವಾರದೋಳ್ ಸ್ನಾನ ಸಂಧ್ಯೆಯಮುಗಿಸಿ | ಘನ ತಾಮ್ರ ತಗದಿನೋಳ್ ಇಲ್ಲವೇ ರಟ್ಟಿನೋಳ್ ಈ ಚಕ್ರ ಲಿಖಿಸಲಹುದು ||೨ ||
ಆ ಲಿಖಿತ ಚಕ್ರಮಂ ಶೋಡಶದ ಪೂಜೆಯಿಂ | ಕಾಲದೇಶವ ಭಜಿಸಿ ಬೀಜ ಮಂತ್ರಗಳಿಂದ | ಕಾಲನಾಗ್ರಜನನ್ನು ಆ ಪ್ರಾಣತಿಷ್ಟತೆಯ ಗೈದು ರಕ್ಷಿಸು ನಿಲಯದಲ್ಲಿ ||೩ ||
ಶನಿದೇವನಾ ದೃಷ್ಟಿ ಕ್ರೂರರದಲಿ ಇರುವವರು | ಅನತಿ ಭಯ ಭಕ್ತಿಯಿಂ ಚಕ್ರವಂ ಪೂಜಿಸಲು | ಅನುಪಮದಿ ದೇವತಾ ಶಾಂತವೃತ್ತಿಯು ಪಡೆದು ವ್ಯಥೆಯನೂ ಶಮನಮಾಡೆ || ೪ ||
ಚಕ್ರವಂ ರಕ್ಷಿಪರ ಸರ್ವ ದುಃಖದ ನಾಶ | ಅಕ್ಕರದಿ ಶನಿದೇವ ಕೊಡುವ ಸುಖ ಶಾಂತಿಯಂ | ಬೊಕ್ಕಸಂ ಭರದಲಿಯೇ ಧನ ಧಾನ್ಯ ಸಮೃದ್ಧಿ ಆರೋಗ್ಯ ಭಾಗ್ಯಂಗಳು || ೫ ||    
|| ಶ್ರೀ ಶನೈಶ್ಚರಾರ್ಪಣಮಸ್ತು ||   

No comments:

Post a Comment