Sunday, January 07, 2018

Shanaishchara charitam II / 25 to 48


                                                                                               ಶ್ರೀ ಶನೈಶ್ಚರ ಚರಿತಂ ೨  / ೨೫   ರಿಂದ ೪೮     
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ 
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,
ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )   
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ದ್ವಿತೀಯ  ಸಂಧಿ (೨೫  ರಿಂದ ೪೮ )
ಜನರ ಬಳಗವು ತನ್ನ ಬಗೆಯಿಂ | ತನ್ನ ಆಳಿಕೆ ಒಳಿತು ಕೆಡುಕೆಂ| ಬನ್ನ ಬಳಕೆಯ ಮಾತು ಕತೆಗಳ ಕೇಳಲುದ್ದೇಶ ||೨೫ ||
ಹೀಗಿರಲೊಂದು ಇರುಳಲ್ಲಿ ನೃಪನು | ಆಗಿ ವಾಡಿಕೆ ವೇಷ ಛದ್ಮ ದಿ | ನಗರದಿ  ಹಯ ವೇರಿ ತಿರುಗುವನು ಗೌಪ್ಯದಲಿ ||೨೬ ||
ಪುರವನೆಲ್ಲವು ಸುತ್ತಿ ರಾಜನು | ದ್ವಾರ ಉತ್ತರ ವಿರುವ ಭಾಗಕೆ | ಹಾರುವರ ಸತ್ರದ  ಬಳಿ ಸಾರಿದನು ರಾತ್ರಿಯಲಿ ||೨೭ ||
ಮೀರಿದರ್ಧವ ರಾತ್ರಿ ಸಮಯದಿ | ಮಾರು ಕಾಯದ ಕಪ್ಪು ಛಾಯೆಯ | ನರವನಾವನೋ ಕಾಳರಕ್ಕಸನೊಲ್ವನಚ್ಚರಿಯ ||೨೮ ||
ಮನೆಯು ಒಂದನು ಛತ್ರದೊಳಗೆಡೆ | ಮಾನವಾಕೃತಿ ಸೇರಿತದರಲಿ | ಎನು ಎಂದುನೋಡಲು  ಕುತುಹಲ ಮಾತುಕೇಳಿದೊಡೆ ||೨೯ ||
ಆರಮನೆಯದು ನೋಡಲರಸನು | ನಾರಿನರ ವಾಗ್ವಾದ ಕೇಳಿತು | ನಾರಿಯಿಂದಲೆ ನರಗೆ ಮಾತದು  ಕೇಳಿತೀರೀತಿ ||೩೦ ||
ನೃಪನುದಾರನು ದಯಾಶೀಲನು | ಕೃಪೆಯ ಮಾಲ್ಪುವನರುಹಿದರೆ ನೀವ್ | ನೆಪವ ಹೇಳದೆ ಹೋಗ ಬೇಕೆಂದಾಗ್ರಹವು ಪತಿಗೆ ||೩೧ ||
 ಧನ ಸಹಾಯವ ಪಡೆಯೇ ದೊರೆಯಿಂ | ಹಣವ ವಿನಿಯೋಗಿಸಿಯೇ ದೊರೆಯಿಂ | ತಾನೇ ಜೀವಿಸಲೆಮ್ಮಬಡತನ ದೂರವಾಗುವುದು ||೩೨||  
 ಸತಿಯ ಪ್ರಶ್ನೆಗೆ ಪತಿಯ ಉತ್ತರ | ಸತಿಯೇ ನೀನ್ ಹೇಳುವುದು ನಿಜವು | ಆತನೆಲ್ಲವು ಕೊಟ್ಟರೂ ನಮ ದಕ್ಕುದದು ತಿಳಿಯೆ ||೩೩||
ಸೌರಿ ದೇವನ ಕ್ರೂರ ದೃಷ್ಟಿಯು | ಸೌರ ವರ್ಷದ ಸಪ್ತವಾರ್ಧವು | ಆರಿಂದಲೇನದು ದೊರೆತರೂ ಉಪಯೋಗವಿಲ್ಲೆಂದ ||೩೪ ||
ಅಂತಿಮದ ದಿನ ಬರುವ ಸಪ್ತಮಿ | ಅಂದು ಎರಡು ಪ್ರಹರದಂತ್ಯದಿ | ಪಿನ್ಗಳನು ತಾ ರಾಶಿ ಸಿಂಹಕೆ ವಾಲಿ ಹೋಗುವುನು ||೩೫ ||
ಎನಗೆ ಗ್ರಹಬಲ ಬರುವುದಾಗಲೇ |ತನಕ ನಾಂ ಸಂಯಮದಿ ವರ್ತಿಸೆ | ತಾನೇ ಬರುವುದು ಬೇಡದೆಯೇ ಅದೃಷ್ಟವದು ಎಂದ ||೩೬ ||
ಪ್ರಭೆಯು ಬೀಳಲು ಪಿಪ್ಪಲಾದನ | ನಭವೇ ಕಾಣ್ವುದು ಬಾಳು ಸಹಜವೂ | ಈ ಭವದಿ ನಡೆಯುವುದೆಂದು ನಿದಿದುಸಿರು ಮೇಲೆಳೆದ ||೩೭||   
ಆತು ನಿಂತಲೆ ಕೇಳಿದಾ ನೃಪ |ಆತ ನರನಾರೆಂದು ಮನದಲಿ |ಏತ ಹೊಡೆದಾ ತೆರೆದಿ ನಡೆ ವಿಚಾರ ಮಂಥನವ ||೩೮ ||
ಮತಿಯ ಮಂಥಿಸೆ  ರಾಜನುಂ ತಾ | ಅತಿಯ ವೇಗದಿ ಮನೆಗೆ ತೆರಳಿದ | ರೀತಿ ಎಂತುಂಟೆಂದು ಎನಿಸಿತು ಧನವನೀಯುದಕೆ ||೩೯ ||
ದೊಡ್ಡ ಮೊತ್ತ ದ ದ್ರವ್ಯ  ಕೊಡಲು |ಅಡ್ಡ ದಾರಿಯ ಸಣ್ಣ ಛತ್ರದಿ |ಮಡ್ಡ ಕಳ್ಳರ ಕಾಟವು ಈ ನರಗೆ ಖಂಡಿತವು ||೪೦ ||
ಧನವು ತಾನದು ಮುಚ್ಚಿ ಕೊಟ್ಟರೆ |ಜನಕೆ ತಿಳಿಯದು ಈವ ವಿಷಯವು |ಮನುಜಗೀ ರೀತಿಯಲೆ ಕೊಡುವದು ಲೇಸುತನಗೆನಿಸಿ ||೪೧ ||
ಮರುದಿನವೆ ನೃಪ ತಾನೆ ಸ್ವತ:| ತರಿಸಿ ಕುಂಬಳಕಾಯಿ ದೊಡ್ಡದು | ಕೊರೆದು ತೂತನು ಬೀಜಗಳನು ತೆಗೆದು ಹಾಕಿದನು ||೪೨||
ಆರಿಗೂ ತಿಳಿಯದೆಯೆ ಅರಸನು | ಭರದಿ ತೆಗೆ ಭಂಡಾರದಿಂ ಧನ |ಏರು ಪೇರಾಗಿಸಿಯೆ ತುಂಬಿದ ಮುತ್ತು ರತ್ನಗಳ ||೪೩||
ಪಚ್ಚ ಮಣಿ  ವೈಡೂರ್ಯವಜ್ರವ |ಅಚ್ಚ ನಾಣ್ಯಂಗಳನೆ  ಹಾಕಿದ | ಹಚ್ಚಿ ರಂಧ್ರಕೆ ಮೆಣದಿಂ ಕುಂಬಳವ ರಕ್ಷಿಸಿದ ||೪೪||
ಯಜ್ಜು ಕಾಣದ ಅಂತ್ಯದಲಿ ತಾ | ಸಜ್ಜಿನಿಂ ಕುಂಬಳವ ನಿಟ್ಟನು | ರಾಜನಾಗಲೆ ನೋಡುತಿಹ ತಿಥಿ ಸಪ್ತಮಿಯ  ದಾರಿ ||೪೫ ||
ತಿಥಿಯು ಸಪ್ತಕ ಬರಲು ನೃಪ ಪಂ - | ಡಿತರು ಕೂಡ್ರಲು ಬಂದು ಸಭೆಯಲಿ |ಆತನರುಹಿದ ಹಿಂದೆ ನಡೆದ ಘಟನೆ ಪರಿ ಪರಿಯಿಂ ||೪೬ ||
ಅರಸ ಹೇಳಿದ ಘಟನೆ ತಿಳಿಯಲು | ಭರಿತ ಕುತುಹಲರಾಗಿ ವಿಂದ್ವಾ-  | ಸರಲಿ ಸರಣಿ ವಿಚಾರ ತೆರ ತೆರದಿಂದ ಬರಲಾಗಿ ||೪೭||
ಮನೆಯು ಯಾರದು ಛತ್ರ ದಲಿ ದೊರೆ | ಮನದಿ ಭಯದಲಿ ಕೇಳಲೋರ್ವ ಬು- | ಧನಮಾತಿಗೆ ಉತ್ತರದಿ ಪೇಳಿದನು ಇನ್ನೋರ್ವ್ ||೪೮||      
                                                                                                                                                                                 ಕ್ರಮಶಃ 





No comments:

Post a Comment